ಸಮುದಾಯದ ಜ್ಞಾನ ಸಂಗ್ರಹಗಳನ್ನು ನಿರ್ಮಿಸುವ ಮತ್ತು ಮರಳಿ ಪಡೆಯುವ ಕುರಿತು ಒಂದು ಸಮಾಗಮ
Please click here to see this page in English
ഈ പേജ് മലയാളത്തിൽ കാണാൻ ഇവിടെ ക്ലിക്ക് ചെയ്യുക.
இந்தப் பக்கத்தைத் தமிழில் காண இங்கே சொடுக்கவும்.
ఈ పేజీని తెలుగులో చూడటానికి ఇక్కడ క్లిక్ చేయండి.

ಪರಿಕಲ್ಪನಾ ಟಿಪ್ಪಣಿ
ಸ್ಥಳೀಯ ಮತ್ತು ಆದಿವಾಸಿ ಜನರು ಹಾಗೂ ಸ್ಥಳೀಯ ಸಮುದಾಯಗಳು (ಇಂಡಿಜಿನಸ್ ಪೀಪಲ್ ಅಂಡ್ ಲೋಕಲ್ ಕಂಮ್ಯುನಿಟಿಸ್ - ಐ ಪಿ ಎಲ್ ಸೀಸ್ ) ಎಂಬ ಪದವನ್ನು ತಮ್ಮನ್ನು ಆದಿವಾಸಿಗಳೆಂದು ಗುರುತಿಸಿಕೊಳ್ಳುವ ಮತ್ತು ನಿರ್ದಿಷ್ಟ ಸ್ಥಳೀಯ ಸಮುದಾಯಕ್ಕೆ ಸೇರಿದ ಜನರನ್ನು ಸೂಚಿಸಲು ಬಳಸಲಾಗುತ್ತದೆ. ವಿಶೇಷವಾಗಿ, ತಮ್ಮ ಭೂಮಿ, ಅರಣ್ಯ, ನೀರು ಮತ್ತು ಪರಿಸರ ವ್ಯವಸ್ಥೆಗಳೊಂದಿಗೆ ದೀರ್ಘಕಾಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಜನರನ್ನು ಇದು ಸೂಚಿಸುತ್ತದೆ. ಭಾರತ ಸರ್ಕಾರವು “ಸ್ವದೇಶೀ ” ಅಥವಾ “ಸ್ಥಳೀಯ” ಎಂಬ ಪದವನ್ನು ಬಳಸುವ ಮತ್ತು ಅನ್ವಯಿಸುವ ವಿಚಾರ ಇನ್ನೂ ಚರ್ಚಾಸ್ಪದವಾಗಿದ್ದರೂ, ಈ ಪದವನ್ನು ಸಾಮಾಜಿಕವಾಗಿ ಬಳಕೆಯಲ್ಲಿರುವ ‘ಆದಿವಾಸಿ’ ಎಂಬ ಪದದೊಂದಿಗೆ ಹೆಚ್ಚಾಗಿ ಸಮೀಕರಿಸಲಾಗುತ್ತಿದೆ. ಭಾರತದಲ್ಲಿ, ಆದಿವಾಸಿಗಳ ಕುರಿತ ರಾಜ್ಯದ ನೀತಿಗಳನ್ನು ಅರ್ಥಮಾಡಿಕೊಳ್ಳುವ ಸಂದರ್ಭದಲ್ಲಿ “ಪರಿಶಿಷ್ಟ ಪಂಗಡ” (ಷೆಡ್ಯೂಲ್ಡ್ ಟ್ರೈಬ್) ಎಂಬ ಆಡಳಿತಾತ್ಮಕ ವರ್ಗವನ್ನು ಬಳಸಲಾಗಿದೆ. 2011ರ ಜನಗಣತಿಯ ಪ್ರಕಾರ, 10.4 ಕೋಟಿಗೂ ಹೆಚ್ಚು ಜನರು, ಅಂದರೆ ಒಟ್ಟು ಜನಸಂಖ್ಯೆಯ ಸುಮಾರು 8.6%, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಆದರೆ, ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳು (ಡಿನೋಟಿಫೈಯೆಡ್ ಟ್ರೈಬ್ಸ್ - ಡಿ ಏನ್ ಟೀಸ್) ಹಾಗೂ ಐ ಪಿ ಎಲ್ ಸೀಸ್ ಎಂಬ ವಿಶಾಲ ಪರಿಕಲ್ಪನೆಯೊಳಗೆ ಬರುವ ಇತರ ಮಾನ್ಯತೆ ಪಡೆಯದ ಸಮುದಾಯಗಳ ಸ್ಥಾನಮಾನ, ಮಾನ್ಯತೆ ಮತ್ತು ಪ್ರಾತಿನಿಧ್ಯವು ಭಾರತದಲ್ಲಿ ನೀತಿ ಮತ್ತು ಕಾರ್ಯರೂಪ ಎರಡರಲ್ಲಿಯೂ ಇನ್ನೂ ಬಹುಪಾಲು ದಾಖಲೆಯಾಗದೆ ಉಳಿದಿದೆ.
ಭಾರತದಾದ್ಯಂತ ಆದಿವಾಸಿ ಜನರು ಮತ್ತು ಸ್ಥಳೀಯ ಸಮುದಾಯಗಳು ಅತ್ಯಂತ ವೈವಿಧ್ಯಮಯ ಜ್ಞಾನ ವ್ಯವಸ್ಥೆಗಳನ್ನು ಹೊಂದಿದ್ದಾರೆ. ಭೂಮಿ, ಜೀವವೈವಿಧ್ಯ, ಜೀವನೋಪಾಯ, ಸಂಸ್ಕೃತಿ ಮತ್ತು ಸಮುದಾಯ ಜೀವನದೊಂದಿಗಿನ ಅವರ ಸಂಬಂಧಗಳ ಮೂಲಕ ಈ ಜ್ಞಾನ ವ್ಯವಸ್ಥೆಗಳು ತಲೆಮಾರುಗಳಿಂದ ಅಭಿವೃದ್ಧಿಗೊಂಡು, ಮುಂದಿನ ತಲೆಮಾರುಗಳಿಗೆ ವರ್ಗಾಯಿಸಲ್ಪಟ್ಟಿವೆ. ಈ ಸಮುದಾಯಗಳು ಇತಿಹಾಸಗಳು, ಭಾಷೆಗಳು, ಪರಿಸರ ಜ್ಞಾನ, ಹಾಡುಗಳು, ಕಥೆಗಳು ಮತ್ತು ಭೂಮಿ ಹಾಗೂ ಜೀವನದೊಂದಿಗೆ ಸಂಬಂಧ ಹೊಂದುವ ವಿಶಿಷ್ಟ ವಿಧಾನಗಳನ್ನು ಹೊಂದಿವೆ. ಅವರ ಜೀವಂತ ಜ್ಞಾನ ವ್ಯವಸ್ಥೆಗಳು ಅವರ ಗುರುತು ಮತ್ತು ಸ್ಮೃತಿಯೊಂದಿಗೆ ಆಳವಾಗಿ ಸಂಬಂಧ ಹೊಂದಿವೆ.
ಇಂದು ಸರ್ಕಾರಗಳು, ಸಂಶೋಧಕರು, ಸಂಸ್ಥೆಗಳು ಮತ್ತು ವ್ಯಕ್ತಿಗಳಲ್ಲಿ ಈ ಜ್ಞಾನದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಆದರೆ, ಸಮುದಾಯಗಳನ್ನು ಜ್ಞಾನದ ರಕ್ಷಕರು ಮತ್ತು ನಿರ್ಧಾರ ತೆಗೆದುಕೊಳ್ಳುವವರಾಗಿ ನೋಡುವ ಬದಲು, ಅವರನ್ನು ಸಂಶೋಧನೆಯ ವಿಷಯಗಳಾಗಿ ಅಥವಾ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಫಲಾನುಭವಿಗಳಾಗಿ ಪರಿಗಣಿಸಿರುವ ಸಂದರ್ಭಗಳು ಅನೇಕ. ಕೆಲವು ಸಂದರ್ಭಗಳಲ್ಲಿ, ಸಮುದಾಯದ ಜ್ಞಾನವನ್ನು ಅವರ ಸಂಪೂರ್ಣ ಅರಿವು, ಒಪ್ಪಿಗೆ ಅಥವಾ ಭಾಗವಹಿಸುವಿಕೆ ಇಲ್ಲದೆ ದಾಖಲಿಸಲಾಗಿದೆ ಮತ್ತು ಪ್ರಸಾರ ಮಾಡಲಾಗಿದೆ. ಅನೇಕ ಸಂದರ್ಭಗಳಲ್ಲಿ, ತಮ್ಮ ಬಗ್ಗೆ ದಾಖಲೆಗಳು, ಛಾಯಾಚಿತ್ರಗಳು ಅಥವಾ ದತ್ತಾಂಶಗಳು ಆರ್ಕೈವ್ಗಳು ಮತ್ತು ಇತರ ಸಂಗ್ರಹಗಳಲ್ಲಿ ಅಸ್ತಿತ್ವದಲ್ಲಿವೆ ಎಂಬುದೇ ಸಮುದಾಯಗಳಿಗೆ ತಿಳಿದಿರುವುದಿಲ್ಲ. ಇಂತಹ ವಸ್ತುಗಳು ಕೆಲವೊಮ್ಮೆ ಸಮುದಾಯದ ಇತಿಹಾಸಗಳು, ಸಾಂಸ್ಕೃತಿಕ ಆಚರಣೆಗಳು, ಪರಿಸರ ಜ್ಞಾನ ಹಾಗೂ ಹಕ್ಕುಗಳು ಮತ್ತು ಮಾನ್ಯತೆಯ ಕುರಿತ ಪ್ರಸ್ತುತ ಪ್ರಯತ್ನಗಳನ್ನು ಬಲಪಡಿಸಲು ಸಹಾಯ ಮಾಡಬಹುದು. ಆದರೆ, ಅವು ಸಮುದಾಯಗಳನ್ನು ತಪ್ಪಾಗಿ ಪ್ರತಿನಿಧಿಸಬಹುದು, ಜ್ಞಾನವನ್ನು ಅದರ ಮೂಲ ಸಂದರ್ಭದಿಂದ ಬೇರ್ಪಡಿಸಬಹುದು ಅಥವಾ ಸಮುದಾಯದ ಪೂರ್ವಾನುಮತಿಯಿಲ್ಲದೆ ಸಾಂಸ್ಕೃತಿಕವಾಗಿ ಸೂಕ್ಷ್ಮವಾದ ಜ್ಞಾನಕ್ಕೆ ಪ್ರವೇಶವನ್ನು ಒದಗಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಸಮುದಾಯ ಗುಂಪುಗಳು, ಒಕ್ಕೂಟಗಳು ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ:
- ನಮ್ಮ ಇತಿಹಾಸಗಳು ಮತ್ತು ಜ್ಞಾನ ಯಾರ ಬಳಿ ಇವೆ?
- ಅವುಗಳನ್ನು ಹೇಗೆ ಬಳಸಬೇಕು ಅಥವಾ ಹಂಚಿಕೊಳ್ಳಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ?
- ಭವಿಷ್ಯದ ತಲೆಮಾರುಗಳಿಗಾಗಿ ಅವುಗಳನ್ನು ನಮ್ಮದೇ ನಿಯಮಗಳ ಆಧಾರದ ಮೇಲೆ ಹೇಗೆ ಸಂರಕ್ಷಿಸಬಹುದು?
ಈ ಸಂವಾದಗಳ ಮೂಲಕ, ಆರ್ಕೈವ್ಗಳು ಮತ್ತು ಜ್ಞಾನ ಸಂಗ್ರಹಗಳನ್ನು ಸ್ವಯಂ ಪ್ರತಿನಿಧಿತ್ವ ಮತ್ತು ಸ್ವಯಂ ನಿರ್ಣಯದ ಸ್ಥಳಗಳಾಗಿ ಮರುಕಲ್ಪಿಸಲಾಗುತ್ತಿದೆ.ಕೇವಲ ಸಂರಕ್ಷಣೆಯನ್ನು ಮೀರಿ, ತಮ್ಮ ಜ್ಞಾನವನ್ನು ಹೇಗೆ ದಾಖಲಿಸಬೇಕು, ಕಾಳಜಿಯಿಂದ ನೋಡಿಕೊಳ್ಳಬೇಕು ಮತ್ತು ಹಂಚಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ಸಮುದಾಯಗಳು ಅರ್ಥಪೂರ್ಣ ಪಾತ್ರವನ್ನು ವಹಿಸುವ ಅಗತ್ಯದ ಕುರಿತು ಚರ್ಚಿಸುತ್ತಿವೆ. ಇದು ಸೂಕ್ಷ್ಮವಾದ ಮಾಹಿತಿಯನ್ನು ರಕ್ಷಿಸುವುದು, ತಲೆಮಾರುಗಳ ನಡುವಿನ ಕಲಿಕೆಯನ್ನು ಬಲಪಡಿಸುವುದು ಮತ್ತು ಸಮುದಾಯಗಳು ತಮ್ಮದೇ ಆರ್ಕೈವ್ಗಳನ್ನು ನಿರ್ಮಿಸಿ ನಿರ್ವಹಿಸಲು ಬೆಂಬಲಿಸುವುದರ ಕುರಿತಾಗಿದೆ. ಡಿಜಿಟಲ್ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್- ಏಐ) ವಿಸ್ತರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಇದು ಇನ್ನಷ್ಟು ಮಹತ್ವದ್ದಾಗಿದೆ. ಸಮುದಾಯದ ಜ್ಞಾನವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಮತ್ತು ಮರುಬಳಕೆ ಮಾಡಲಾಗುತ್ತಿದೆ ಎಂಬುದು ಯಾವಾಗಲೂ ಸಮುದಾಯಗಳಿಗೆ ಗೋಚರವಾಗಿರುವುದಿಲ್ಲ ಅಥವಾ ಅದರ ಬಗ್ಗೆ ಹೊಣೆಗಾರಿಕೆಯನ್ನು ಖಚಿತಪಡಿಸಲಾಗುವುದಿಲ್ಲ. ಆರ್ಕೈವ್ಗಳನ್ನು ಮರಳಿ ಪಡೆಯುವುದು ಎಂದರೆ ಸಮುದಾಯದ ಸಾಮೂಹಿಕ ಗೌರವ, ಒಪ್ಪಿಗೆ ಮತ್ತು ನಿಯಂತ್ರಣದೊಂದಿಗೆ ಜ್ಞಾನವು ಭವಿಷ್ಯಕ್ಕೆ ಹೇಗೆ ಸಾಗಬೇಕು ಎಂಬುದನ್ನು ರೂಪಿಸುವುದೂ ಆಗಿದೆ.
ಉಲ್ಲೇಖಗಳು
Ahammad, R., Sangha, K., Evans, J., & Metcalfe, O. (2026). Revisiting the Definition and Recognition of Indigenous Peoples and Local Communities for Biodiversity Conservation. Ecology and evolution, 16(2), e72958. https://doi.org/10.1002/ece3.72958
Bijoy, C. R., & Nongbri, T. (2013). Country technical note on Indigenous Peoples’ issues: Republic of India. International Fund for Agricultural Development (IFAD).
Dhir, R. K. (2015). Indigenous peoples in the world of work in Asia and the Pacific: A status report. International Labour Organization.
Linggi, T. (Ed./Auth.). (2024). The Idu Mishmi Code of Research Ethics (IMCRE) (2nd ed., 2025). Idu Mishmi Cultural and Literary Society (IMCLS).
Salar, N., & Murthy, S. (2023). The exploited yet legally underappreciated apparel domain of indigenous communities: Tracing WIPO’s efforts and ongoing challenges. The Journal of World Intellectual Property, 26, 312–327. https://doi.org/10.1111/jwip.12266
Shankar, P. (2026, July 6). Indigenous communities missing in India’s report on Access and benefit sharing [commentary]. Mongabay India. https://india.mongabay.com/2026/07/indigenous-communities-missing-in-indias-report-on-access-and-benefit-sharing-commentary/
ಕಾರ್ಯಾಗಾರದ ವೇಳಾಪಟ್ಟಿ
ದಿನಾಂಕ: 30 ಮತ್ತು 31 ಜುಲೈ 2026
ಸಮಯ: ಬೆಳಿಗ್ಗೆ 9:30ರಿಂದ ಸಂಜೆ 6:00ರವರೆಗೆ
ಸ್ಥಳ: ಪತಂಜಲಿ ಸೆಮಿನಾರ್ ಹಾಲ್, ದಿ ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್ ಅಂಡ್ ಟೆಕ್ನಾಲಜಿ (ಟಿಡಿಯು), ಬೆಂಗಳೂರು
ವಿಧಾನ: ನೇರ ಭಾಗವಹಿಸುವಿಕೆ, ಸಣ್ಣ ಗುಂಪುಗಳ ಸಂವಾದಗಳು, ಕಥೆ ಹಂಚಿಕೊಳ್ಳುವಿಕೆ, ಸಹಯೋಗಿ ಚಟುವಟಿಕೆಗಳು ಮತ್ತು ಮುಕ್ತ ಸಂವಾದ
ಭಾಷೆ: ಬಹುಭಾಷಿಕ — ಇಂಗ್ಲಿಷ್, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು
ಆಯೋಜಕರು: ಅಂತರಾ ಅಡ್ವೈಸರಿ, ಆರ್ಕೈವ್ಸ್ ಅಟ್ ಏನ್ ಸಿ ಬಿ ಎಸ್, ಕೀಸ್ಟೋನ್ ಫೌಂಡೇಶನ್, ಮಿಲ್ಲಿ ಆರ್ಕೈವ್ಸ್ ಫೌಂಡೇಶನ್ ಮತ್ತು ಯೂನಿವರ್ಸಿಟಿ ಒಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್ ಅಂಡ್ ಟೆಕ್ನಾಲಜಿ (ಟಿ ಡಿ ಯು)
ಅನುದಾನ ಸಹಾಯ: ಮಿಲ್ಲಿ ಆರ್ಕೈವ್ಸ್ ಫೌಂಡೇಶನ್ಗೆ ರಾಶೇಶ್ ಮತ್ತು ವಿದ್ಯಾ ಶಾ ಫ್ಯಾಮಿಲಿ ಫೌಂಡೇಶನ್ನಿಂದ ಹಾಗೂ ಕೀಸ್ಟೋನ್ ಫೌಂಡೇಶನ್ಗೆ ಗ್ಲೋಬಲ್ ಸೌತ್ ಅಲೈಯನ್ಸ್ನಿಂದ ನೀಡಲಾಯುತು.
ಭಾಗವಹಿಸಿದವರು: ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಆದಿವಾಸಿ ಜನರು ಮತ್ತು ಸ್ಥಳೀಯ ಸಮುದಾಯಗಳು (ಐ ಪಿ ಎಲ್ ಸೀಸ್), ಸಮುದಾಯ ಒಕ್ಕೂಟಗಳು, ಆರ್ಕೈವಿಸ್ಟ್ಗಳು, ಸಾಂಸ್ಕೃತಿಕ ಕಾರ್ಯಕರ್ತರು, ಸಂಶೋಧಕರು ಮತ್ತು ಸಂಸ್ಥೆಗಳು.
ಕಾರ್ಯಾಗಾರದ ಸಂಕ್ಷಿಪ್ತ ವರದಿ
ಈ ಪ್ರಶ್ನೆಗಳ ಕುರಿತು ಒಟ್ಟಾಗಿ ಚಿಂತಿಸಲು ಈ ಕಾರ್ಯಾಗಾರವು ಎಲ್ಲರನ್ನು ಒಂದೆಡೆ ಸೇರಲು ನೀಡಿದ ಆಹ್ವಾನವಾಗಿತ್ತು. ಜ್ಞಾನ, ಸ್ಮೃತಿ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಕೆಲಸ ಮಾಡುತ್ತಿರುವ ಆದಿವಾಸಿ ಜನರು ಮತ್ತು ಸ್ಥಳೀಯ ಸಮುದಾಯಗಳು (ಐ ಪಿ ಎಲ್ ಸೀಸ್), ಜ್ಞಾನ ಕಾರ್ಯಕರ್ತರು, ಆರ್ಕೈವಿಸ್ಟ್ಗಳು, ಸಂಶೋಧಕರು ಮತ್ತು ಸಂಸ್ಥೆಗಳು ಈ ಕಾರ್ಯಾಗಾರದಲ್ಲಿ ಒಟ್ಟಾಗಿ ಭಾಗವಹಿಸಿದರು. ಈ ಕಾರ್ಯಾಗಾರದಲ್ಲಿ ದಕ್ಷಿಣ ಭಾರತದ 5 ರಾಜ್ಯಗಳಿಂದ 24 ಸಮುದಾಯಗಳನ್ನು ಪ್ರತಿನಿದಿಸುತ್ತಾ 57 ಮಂದಿ ಭಾಗವಹಿಸಿದರು. ವಿವಿಧ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾದ ಭಾಗವಹಿಸುವಿಕೆ ಆಧಾರಿತ ಮತ್ತು ಬಹುಭಾಷಿಕ ಸ್ಥಳವಾಗಿ ಈ ಸಮಾಗಮವನ್ನು ರೂಪಿಸಲಾಗಿತ್ತು. ಒಂದೇ ಒಂದು ವಿಧಾನವನ್ನು ಕಂಡುಹಿಡಿಯುವುದಕ್ಕಿಂತ, ಸಮುದಾಯಗಳು ಮತ್ತು ಸಂಸ್ಥೆಗಳ ನಡುವಿನ ಆಲಿಕೆ, ಸಂವಾದ ಮತ್ತು ಪರಸ್ಪರ ಕಲಿಕೆಗೆ ಕಾರ್ಯಾಗಾರದಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು.
ನಾವು ಒಟ್ಟಾಗಿ ಚರ್ಚಿಸಿದ ವಿಷಯಗಳು:
-
ಸಮುದಾಯದ ಒಳಗಿನಿಂದ ನೋಡಿದಾಗ ಒಂದು ಸಮುದಾಯ ಆರ್ಕೈವ್ ಹೇಗಿರಬಹುದು?
-
ಸಮುದಾಯದ ಅಗತ್ಯಗಳು, ಗುರುತುಗಳು ಮತ್ತು ಭವಿಷ್ಯವನ್ನು ಬೆಂಬಲಿಸಲು ಆರ್ಕೈವ್ಗಳು ಹೇಗೆ ಸಹಾಯ ಮಾಡಬಹುದು?
-
ಯಾವ ರೀತಿಯ ಜ್ಞಾನವನ್ನು ಹಂಚಿಕೊಳ್ಳಬಹುದು ಮತ್ತು ಯಾವುದನ್ನು ರಕ್ಷಿಸಬೇಕು?
-
ಒಪ್ಪಿಗೆ, ಗೌರವ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?
-
ಸಮುದಾಯಗಳು, ಸಂಸ್ಥೆಗಳು ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಒಟ್ಟಾಗಿ ಕೆಲಸ ಮಾಡುವಾಗ ಯಾವ ಪಾತ್ರಗಳನ್ನು ವಹಿಸಬಹುದು?
ಐ ಪಿ ಎಲ್ ಸೀ ಗುಂಪುಗಳು – 24
ಆಲು ಕುರುಂಬ, ಹಿಂದುಳಿದ ವರ್ಗಗಳು, ಬಡಗ, ಚೆಂಚು, ಚೋಳನಾಯಕನ್, ಕರಾವಳಿ ಸಮುದಾಯಗಳು, ದಳಿತ್, ಹಕ್ಕಿ ಪಿಕ್ಕಿ, ಇರುಳ, ಇರುಳಿಗ, ಕಾಡರ್, ಕಾಟ್ಟುನಾಯಕಯನ್, ಕುರಬರ್, ಕುರ್ಚಿಯ, ಲಂಬಾಣಿ, ಮಲಮಲಸರ್, ಮಲಮುತ್ತನ್, ಮಲಸರ್, ಮಲಯನ್, ಮುತುವನ್, ಪಣಿಯ, ಸೌರ, ಸೋಲಿಗ ಮತ್ತು ತೊಡ.
ಭಾಗವಹಿಸಿದವರು – 57
ಎ. ಚಿರಂಜೀವಿ, ಅಜಿತ್ ಕುಟ್ಟನ್, ಅಖಿಲ ಜಾರ್ಜ್, ಅರವಿಂದ್ ಅಸ್ತರ್ಸ್, ಅರುಣ್, ಅಶ್ವತಿ ಜಿ ವಿ, ಬಾಣಲ ಕ್ರಾಂತಿ ಕುಮಾರ್, ಭುವನ್, ಬಿದ್ದಿಕಾ ಸುಹಾಸಿನಿ, ಡೇನಿಯಲ್ ಸಾಮ್ರಾಜ್, ದರವಯ್ಯ, ದುರ್ಗಾ, ದುರ್ಗಾ ಮೂರ್ತಿ, ಜಿ. ಆಂಜಿನಮ್ಮ, ಗೀತಾ ವಿ ಕೆ, ಜಡೇಸ್ವಾಮಿ ಎಂ, ಜೆಯಂತಿ ಆರ್, ಜೆ ಆರ್ ಮಣಿ, ಕಾರಾಲನ್, ಕಾವ್ಯ ಕೆ, ಕುಮುದ ಸುಶೀಲ್, ಲಕ್ಷ್ಮಿ ಎಂ, ಮದನ್, ಮಲ್ಲಿಕಾರ್ಜುನ, ಮಂಡ್ಲಿ ಅಮೂಲ್ಯ, ಮಂಡ್ಲಿ ಶಿವಯ್ಯ, ಮಂಜುಳ, ಮನು ಚೌಧರಿ. ಸಿ, ಮುರುಗನ್, ಎನ್.ನರಸಮ್ಮ, ನಾರಾಯಣಸ್ವಾಮಿ, ನೀಲಕಾಂತ್ ನಾಗಪ್ಪ ಕುರುಬರ್, ಪಿ.ಚಂದ್ರನ್, ಪಲ್ಲವಿ, ಪ್ರಭು, ರಾಜೇಶ್ವರಿ, ರಾಜು, ರಮೇಶ್ ಕೃಷ್ಣನ್, ರೆಬ್ಬ ಪ್ರಕಾಶ್, ಎಸ್ ಪಾಳಯಂ, ಸರವಣನ್, ಸವಾರ ತೋಟ ಮಿನ್ನಾ ರಾವ್, ಸಿಬು, ಶಾಲಿನಿ ಎ, ಶ್ರೀಕಾಂತ್, ಸುಮಿತ್ರಾ ಕೆ, ಸುರೇಶ ಪಿ, ಸುಶಿಲಪ್ಪ, ಸ್ಯಾಂಜಿತ್ ಪಿಕೆ ಟಿ.ಬಿ. ದಿನೇಶ್, ಟಿಜು ಸಿ ಥೋಮಸ್, ವಿ. ವೆಂಕಟೇಶ್, ವಸಮಲ್ಲಿ ಕೆ, ವಿನೋದ್ ಚೆಲ್ಲನ್, ವಿಷ್ಣು, ಯದುಕ್ರಿಷ್ಣ ಕೆ ಆರ್ ಮತ್ತು ಯುಗೇಶ್.
ಆಯೋಜಕರು – 7
ಅಂಜಲಿ ಜೆ ಆರ್, ಅಪರ್ಣಾ ಯು, ಫೈಸಲ್ ಆರ್, ರಂಜನಿ ಪಿ, ಸಮೀರ ಎ, ವೆಂಕಟ್ ಎಸ್, ವಿನಯ್ ಕೆ ಟಿಡಿಯುನ ಸಿಬ್ಬಂದಿ ಮತ್ತು ಬೋಧಕವರ್ಗದವರು ನೀಡಿದ ಸಹಕಾರಕ್ಕಾಗಿ ನಾವು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಸ್ವಯಂಸೇವಕರು – 12
ಅಭಿಶಯ್ ಜೆ, ಧಾತ್ರಿ ಎಸ್, ಧಾನ್ಯಾ ಎಸ್ ಆರ್, ದೀಪಿಕಾ ಎಸ್, ಜಾನಕಿ ಎಸ್, ನೂರುನ್ನಿಸಾ, ಓಜಸ್ ಕೆ, ಪಾರ್ವತಿ ವಿ, ಸಂಜನಾ ಜಿ ವೈ, ಶ್ರುತಿ ಎನ್ ಜೆ, ಸುಗನ್ಯಾ ಎಸ್, ವಿದ್ಯಾ ಮತ್ತು ರವಿ ಕೆ ಬಿ.
ಈ ಸಮಾಗಮ ಏಕೆ ಮುಖ್ಯ?
ಈ ಕಾರ್ಯಾಗಾರವು ದೀರ್ಘಕಾಲದ ಒಂದು ಪ್ರಯಾಣದ ಭಾಗವಾಗಿತ್ತು. ಸಮುದಾಯಗಳು ಮತ್ತು ಆರ್ಕೈವ್ಗಳ ನಡುವೆ ಬಲವಾದ ಸಂಬಂಧಗಳನ್ನು ನಿರ್ಮಿಸುವುದು, ವಿವಿಧ ಪ್ರದೇಶಗಳ ನಡುವಿನ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಜ್ಞಾನದೊಂದಿಗೆ ಕೆಲಸ ಮಾಡಲು ಸಮುದಾಯದ ಅನುಭವಗಳಿಂದ ರೂಪುಗೊಂಡ ಪ್ರಾಯೋಗಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯ ಆರಂಭವೇ ಈ ಕಾರ್ಯಾಗಾರವಾಗಿತ್ತು. ಈ ಸಮಾಗಮದಿಂದ ದೊರೆತ ಕಲಿಕೆಗಳು ಭಾರತದಲ್ಲಿ ಸಮುದಾಯ ಆರ್ಕೈವಿಂಗ್ ಪದ್ಧತಿಗಳ ಕುರಿತು ಬಹುಭಾಷಿಕ ಮಾರ್ಗದರ್ಶಿ ರೂಪಿಸುವಲ್ಲಿ ಕೊಡುಗೆ ನೀಡಲಿವೆ. ಈ ಮಾರ್ಗದರ್ಶಿಯು ಇದರಲ್ಲಿ ಭಾಗವಹಿಸಿದವರ ಧ್ವನಿಗಳು ಮತ್ತು ಅನುಭವಗಳಿಂದ ರೂಪುಗೊಳ್ಳಲಿದೆ. ಈ ಉಪಕ್ರಮದೊಂದಿಗೆ ಸಹಯೋಗಿಸಲು ನೀವು ಆಸಕ್ತಿ ಹೊಂದಿದ್ದರೆ, ದಯವಿಟ್ಟು [coarchives26@gmail.com] ಗೆ ಬರೆಯಿರಿ.
ಇಲ್ಲಿ ಪ್ರಕಟಿಸಿರುವ ಯಾವುದೇ ವಿಷಯದಲ್ಲಿ ತಿದ್ದುಪಡಿ ಅಥವಾ ತೆಗೆದುಹಾಕುವಿಕೆಯ ವಿನಂತಿ ಇದ್ದರೆ, ದಯವಿಟ್ಟು [coarchives26@gmail.com] ಗೆ ಬರೆಯಿರಿ.
ಛಾಯಾಚಿತ್ರಗಳು

ಕಾರ್ಯಾಗಾರದ ಸಂದರ್ಭದಲ್ಲಿ ಪ್ರದರ್ಶಿಸಲಾದ “ಸ್ಮೃತಿಯ ಸಂಕೇತಗಳು”. ಸ್ಮೃತಿಯ ಸಂಕೇತ (ಸಿಂಬಲ್ ಒಫ್ ಮೆಮೊರಿ):ವ್ಯಕ್ತಿಯೊಬ್ಬರು ಅಥವಾ ಸಮುದಾಯವೊಂದು ತಮ್ಮ ಅಥವಾ ತಮ್ಮ ಸಮುದಾಯದ ಸ್ಮೃತಿಯನ್ನು ಸಂರಕ್ಷಿಸುವ ಮತ್ತು ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ ಎಂದು ನಂಬುವ ವಸ್ತು.

ಎರಡು ದಿನಗಳ ಕಾರ್ಯಾಗಾರ ನಡೆದ ಪತಂಜಲಿ ಬ್ಲಾಕ್ನ ಮುಂಭಾಗದಲ್ಲಿ ತೆಗೆದ ಗುಂಪು ಛಾಯಾಚಿತ್ರ.

ಎರಡು ದಿನಗಳ ಕಾರ್ಯಾಗಾರ ನಡೆದ ಪತಂಜಲಿ ಬ್ಲಾಕ್ನ ಪ್ರವೇಶದ್ವಾರದಲ್ಲಿ ನೋಂದಣಿು.

ಅಂಜಲಿ, ದೀಪಿಕಾ ಮತ್ತು ಧಾನ್ಯಾ ಅವರು ಭಾಗವಹಿಸುವವರನ್ನು ಸ್ವಾಗತಿಸುತ್ತಿರುವುದು.

ನೋಂದಣಿಯ ನಂತರ ಸಂಜನಾ ಅವರು ಭಾಗವಹಿಸುವವರು ತಂದಿದ್ದ ‘ಸ್ಮೃತಿಯ ಸಂಕೇತ’ ವಸ್ತುಗಳನ್ನು ಸಂಗ್ರಹಿಸುತ್ತಿರುವುದು.

ಅಭಿಶಯ್ ತೆಲುಗು ಭಾಷಾ ಗುಂಪಿನಲ್ಲಿ ಅನುವಾದ ಮಾಡುತ್ತಿರುವುದು.

ಪಾರ್ವತಿ ಮಲಯಾಳಂ ಭಾಷಾ ಗುಂಪಿನಲ್ಲಿ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿರುವುದು.

ತೆಲುಗು ಭಾಷಾ ಗುಂಪಿನ ಭಾಗವಹಿಸುವವರು ಅಂಜಲಿ ಅವರ ಪ್ರಸ್ತುತಿಯನ್ನು ದಾಖಲಿಸಿಕೊಳ್ಳುತ್ತಿರುವುದು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಗುವನ್ನು ಸಂಜನಾ ನೋಡಿಕೊಳ್ಳುತ್ತಿರುವುದು.

ಕೀಸ್ಟೋನ್ ಫೌಂಡೇಶನ್ನ ಫೈಸಲ್ ಹಕ್ಕುಗಳು ಮತ್ತು ಜವಾಬ್ದಾರಿಗಳ ನಕ್ಷೆ (ಮ್ಯಾಪಿಂಗ್ ರೈಟ್ಸ್ ಅಂಡ್ ರೆಸ್ಪೋನ್ಸಿಬಿಲಿಟಿಸ್) ಕುರಿತು ಸಂವಾದವನ್ನು ಮುನ್ನಡೆಸುತ್ತಿದ್ದದ್ದು.

ಅಂಜಲಿ ಅವರು ಆರ್ಕೈವ್ಗಳ ಪರಿಚಯ ಮತ್ತು ಆದಿವಾಸಿ ಜನರು ಹಾಗೂ ಸ್ಥಳೀಯ ಸಮುದಾಯಗಳ ( ಐ ಪಿ ಎಲ್ ಸೀಸ್) ಹೊಂದಿಗಿನ ಅವುಗಳ ಸಂಬಂಧದ ಕುರಿತು ಪ್ರಸ್ತುತಿ ಹಂಚಿಕೊಳ್ಳುತ್ತಿರುವುದು.

ತಮಿಳು ಭಾಷಾ ಗುಂಪು ಚರ್ಚೆಯಲ್ಲಿ ತೊಡಗಿರುವುದು.

ಮಿಲ್ಲಿ ಆರ್ಕೈವ್ಸ್ ಫೌಂಡೇಶನ್ನ ವೆಂಕಟ್ ಅವರು ಬೌದ್ಧಿಕ ಆಸ್ತಿ (ಇಂಟಲೆಕ್ಚುಯಲ್ ಪ್ರಾಪರ್ಟಿ ) ಕುರಿತು ತಮ್ಮ ಪ್ರಸ್ತುತಿಯನ್ನು ಹಂಚಿಕೊಳ್ಳುತ್ತಿರುವುದು.

ದಿ ಯೂನಿವರ್ಸಿಟಿ ಒಫ್ ಟ್ರಾನ್ಸ್-ಡಿಸ್ಸಿಪ್ಲಿನರಿ ಹೆಲ್ತ್ ಸೈನ್ಸಸ್ ಅಂಡ್ ಟೆಕ್ನಾಲಜಿ (ಟಿ ಡಿ ಯು)ಯ ಸಮೀರಾ ಅವರ ನೇತೃತ್ವದಲ್ಲಿ ಐ ಪಿ ಎಲ್ ಸೀಸ್ ಗಾಗಿ ಮತ್ತುಐ ಪಿ ಎಲ್ ಸೀಸ್ ಜೊತೆಗೂಡಿ ಆರ್ಕೈವ್ಗಳನ್ನು ಮರುಕಲ್ಪಿಸುವುದು ಎಂಬ ವಿಷಯದ ಕುರಿತು ಕನ್ನಡ ಭಾಷಾ ಗುಂಪು ಸಂವಾದ ನಡೆಸುತ್ತಿರುವುದು.

ಆರ್ಕಿವ್ಸ್ ಅಟ್ ಏನ್ ಸಿ ಬಿ ಎಸ್ ನ ಅಂಜಲಿ ವಿನಯೊಂದಿಗೆ ಫೇರ್ ಮತ್ತು ಕೇರ್ ತತ್ವಗಳ ಪರಿಚಯ ಕುರಿತ ಅಧಿವೇಶನವನ್ನು ಸಹನಡೆಸುತ್ತಿರುವುದು.

ಐ ಪಿ ಎಲ್ ಸೀ ಸಮುದಾಯಗಳು ಸ್ಮೃತಿಯನ್ನು ಸಂರಕ್ಷಿಸಲು ಮತ್ತು ಹಂಚಿಕೊಳ್ಳಲು ಬಳಸುವ ಪದಗಳು ಮತ್ತು ಪರಿಕಲ್ಪನೆಗಳು.

ಧಾನ್ಯ ಅವರು ತೆಲುಗು ಭಾಷಾ ಗುಂಪಿನ ಒಂದು ಅಧಿವೇಶನವನ್ನು ಧ್ವನಿಮುದ್ರಿಸುತ್ತಿರುವುದು.

ತಮಿಳು ಭಾಷಾ ಗುಂಪು ಚರ್ಚೆಯಲ್ಲಿ ತೊಡಗಿರುವುದು.

ಧಾನ್ಯ ಅವರು ತೆಲುಗು ಭಾಷಾ ಗುಂಪಿನಲ್ಲಿ ಅನುವಾದ ಮಾಡುತ್ತಿರುವುದು.

ಮಲಯಾಳಂ ಭಾಷಾ ಗುಂಪಿನ ಅಧಿವೇಶನ.

ಮಧ್ಯಾಹ್ನದ ಊಟದ ನಂತರದ ನಿದ್ದೆ ದೂರಮಾಡಲು ಸಮೀರಾ ಅವರ ನೇತೃತ್ವದಲ್ಲಿ ನಡೆದ ಒಂದು ಚಟುವಟಿಕೆ.

ಕೀಸ್ಟೋನ್ ಫೌಂಡೇಷನ್ನಿನ ರಂಜನಿ ಅವರು ತಮಿಳು ಭಾಷಾ ಗುಂಪಿನಲ್ಲಿ ಅನುವಾದ ಮಾಡುತ್ತಿರುವುದು.

ಅಂತರ ಅಡ್ವೈಸರಿನ ಅಪರ್ಣ ಅವರು ತೆಲುಗು ಭಾಷಾ ಗುಂಪಿನಲ್ಲಿ ಅನುವಾದ ಮಾಡುತ್ತಿರುವುದು.

